ಕರ್ಜನ್, ಜಾರ್ಜ್‍ನ್ಯಾಥೆನಿಯಲ್, ಕೆಡ್ಲ್‍ಸ್ಟನ್ ಮಾಕ್ರ್ವಿಸ್
 1859-1925. ಇಂಗ್ಲೆಂಡಿನ ರಾಜಕಾರಣಿ. ಭಾರತದ ವೈಸ್‍ರಾಯ್ (1808-1905), ಬ್ರಿಟನಿನ ವಿದೇಶಾಂಗ ಕಾರ್ಯದರ್ಶಿ (1919-1924). 4ನೆಯ ಬ್ಯಾರನ್ ಸ್ಕಾರ್ಸ್‍ಡೇಲನ ಹನ್ನೊಂದು ಮಕ್ಕಳ ಪೈಕಿ ನಾಲ್ಕನೆಯವನಾಗಿ 1859ರ ಜನವರಿ 11ರಂದು ಡರ್ಬಿಷೈರಿನ ಕೆಡ್ಲ್‍ಸ್ಟನ್ ಹಾಲಿನಲ್ಲಿ ಹುಟ್ಟಿದ. ತಂದೆ ಸಂಕೋಚ ಸ್ವಭಾವದ ಪ್ರಾಟೆಸ್ಟಂಟ್ ದೀಕ್ಷಾ ಬದ್ಧ ಪುರೋಹಿತ. ಕಜರ್óನನಿಗೆ 16 ವರ್ಷವಾಗಿದ್ದಾಗ ತಾಯಿ ತೀರಿಕೊಂಡಳು. ಬಾಲ್ಯದಲ್ಲಿ ಕಜರ್ûನನ ಮೇಲೆ ಬಹುವಾಗಿ ಪ್ರಭಾವ ಬೀರಿದವರೆಂದರೆ ಆತನ ಗೃಹ ಶಿಕ್ಷಕಿ ಮತ್ತು ಪ್ರಾಥಮಿಕ ಶಾಲಾಧ್ಯಾಪಕ. ಕಷ್ಟಪಟ್ಟು ದುಡಿಯುವ ಅಭ್ಯಾಸವೂ ವಿವರಗಳನ್ನು ಗಮನಿಸುವ ಗುಣವೂ ಕಜರ್ûನನಿಗೆ ಬಂದದ್ದು ಇವರಿಂದ. ಈಟನ್ ಆಕ್ಸ್‍ಫರ್ಡ್‍ಗಳಲ್ಲಿ ಕಜರ್ûನ್ ಶಿಕ್ಷಣ ಪಡೆದ. ಆಕ್ಸ್‍ಫರ್ಡಿನಲ್ಲಿದ್ದಾಗ ಅವನಿಗೆ ಬೆನ್ನುಮೂಳೆ ಬಾಗಿತು. ಈ ನೋವನ್ನವನ್ನು ತನ್ನ ಇಡೀ ಜೀವನಪರ್ಯಂತ ಅನುಭವಿಸಬೇಕಾಯಿತು. ಬಾಗಿದ ಬೆನ್ನನ್ನು ನೆಟ್ಟಗೆ ಮಾಡಲು ಕಜರ್ûನ್ ಉಕ್ಕಿನ ಕವಚ ತೊಡುತ್ತಿದ್ದ. ಇದರಿಂದ ಇಡೀ ದೇಹವೇ ಸೆಟೆದಂತೆ ಕಾಣುತ್ತಿತ್ತು. ಈ ಗುಣವೇ ಮನಸ್ಸನ್ನೂ ಹೊಕ್ಕಿ ತೇನೋ ಎಂಬಂತೆ ಮುಂದಿನ ಜೀವನದಲ್ಲಿ ಅವನ ನಡತೆಯೂ ಘಟನೆಗಳೂ ರೂಪುಗೊಂಡುವು. ಕಾಲೇಜು ಸಂಘದ ಅಧ್ಯಕ್ಷನಾಗಿ ಕರ್ಜûನ್ ಆಯ್ಕೆಗೊಂಡ. ಶಿಕ್ಷಣ ಮುಗಿದ ಮೇಲೆ ಧಾರಾಳವಾಗಿ ಸಂಚರಿಸಿದ; ಸಮಾಜ ಜೀವನದಲ್ಲಿ ಬೆರೆತ. 

ಕನ್ಸರ್ವೆಟಿವ್ ಪಕ್ಷದ ವತಿಯಿಂದ ಕಜರ್ûನ್ ಬ್ರಿಟಿಷ್ ಪಾರ್ಲಿಮೆಂಟನ್ನು ಪ್ರವೇಶಿಸಿದ್ದು 1886ರಲ್ಲಿ. ಐದು ವರ್ಷಗಳ ಅನಂತರ (1891) ಆತ ಭಾರತಕ್ಕೆ ಕೆಳಕಾರ್ಯದಶಿಯಾಗಿ ನೇಮಕಹೊಂದಿದ. 1895ರಲ್ಲಿ ವಿದೇಶಾಂಗ ವ್ಯವಹಾರಗಳ ಕೆಳಕಾರ್ಯದರ್ಶಿಯ ಹುದ್ದೆ ಅವನಿಗೆ ಲಭ್ಯವಾಯಿತು.

ಈ ಕಾಲದಲ್ಲಿ ಕಜರ್ûನ್ ಮಧ್ಯ ಏಷ್ಯ, ಪಶ್ಚಿಮ ಏಷ್ಯ, ಭಾರತ, ಚೀನ, ಅಮೆರಿಕ ಮುಂತಾದ ಕಡೆಗಳಲ್ಲಿ ಪ್ರವಾಸಮಾಡಿ ವಿಪುಲವಾದ ಸಾಮಗ್ರಿಯನ್ನೂ ಅನುಭವವನ್ನೂ ಸಂಗ್ರಹಿಸಿಕೊಂಡ. ಅವನ ಲೇಖನಿಯಿಂದ ಅನೇಕ ಪುಸ್ತಕಗಳು ಹೊರ ಬಂದುವು. 1895ರಲ್ಲಿ ಕಜರ್ûನ್ ಅಮೆರಿಕದ ಕೋಟ್ಯಧಿಶ್ವರನೊಬ್ಬನ ಮಗಳನ್ನು (ಮೇರಿ ಲೀಟರ್) ಮದುವೆಯಾದ. ಕಜರ್ûನ್ ಅವಳ ಚೆಲುವಿನಿಂದ ಆಕರ್ಷಿತನಾಗಿದ್ದರಿಂದ ಅವನ ಶಠತೆ ಸ್ವಲ್ಪ ತಗ್ಗಿತು. ಹೆಂಡತಿಯ ಕಡೆಯಿಂದ ಬಂದ ಸಂಪತ್ತಿನಿಂದಾಗಿ ಆತ ಮುಂದೆ ವೈಭವದ ಜೀವನ ನಡೆಸಿದ.											   *
ಕಜರ್ûನ್ ಭಾರತದ ವೈಸ್ರಾಯಿಯಾದದ್ದು 1898ರಲ್ಲಿ. ಆಗ ಅವನಿಗೆ ಇನ್ನೂ 40 ವರ್ಷ ತುಂಬಿರಲಿಲ್ಲ. ಈ ಹೊಸ ಹುದ್ದೆಯಲ್ಲಿ ಕಜರ್ûನ್ ಅತ್ಯಂತ ಉತ್ಸಾಹದಿಂದಲೇ ಕಾರ್ಯವನ್ನಾರಂಭಿಸಿದ. ತನ್ನ ವೈಸ್‍ರಾಯ್‍ಗಿರಿಯಲ್ಲಿ ಕಜರ್ûನ್ ಮಾಡಿದ ಸುಧಾರಣೆಗಳೂ ಸಾಧನೆಗಳೂ ಅನೇಕ. ಬ್ರಿಟಿಷ್ ಆಡಳಿತಕ್ಕೆ ಕಿರುಕುಳ ಕೊಡುತ್ತಿದ್ದ ವಾಯವ್ಯ ಗಡಿಪ್ರದೇಶದ ಜನರ ಮೇಲೆ ಹೆಚ್ಚಿನ ಹತೋಟಿ ತರುವ ಉದ್ದೆಶದಿಂದ ಕಜರ್ûನ್ ಅದನ್ನೊಂದು ಪ್ರತ್ಯೇಕ ಪ್ರಾಂತ್ಯವಾಗಿ ವಿಭಜಿಸಿದ. ಆದರೂ ಪರಿಸ್ಥಿತಿ ಕೈಮೀರಿದ್ದರಿಂದ 1901ರಲ್ಲಿ ವಜಿûೀರಿಗಳ ಮೇಲೆ ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು. ಇದು ಬ್ರಿಟಿಷ್‍ರ ವಿಜಯವಾಗಿ ಪರ್ಯವಸಾನಗೊಂಡಿತು. ಬ್ರಿಟಿಷ್ ಹಿತಗಳಿಗೆ ರಷ್ಯನರಿಂದ ಧಕ್ಕೆಯೊದಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕಜರ್ûನ್ 1903ರಲ್ಲಿ ಪರ್ಷಿಯನ್ ಖಾರಿ ಪ್ರದೇಶಕ್ಕೆ ಭೇಟಿಕೊಟ್ಟ. ಟಿಬೆಟಿನಲ್ಲಿ ಅವರ ಪ್ರಭಾವ ಬೆಳೆಯದಂತೆ ಮಾಡಲು ಬ್ರಿಟಿಷ್ ನಿಯೋಗವೊಂದನ್ನು ಅಲ್ಲಿಗೆ ಕಳಿಸಿದ. ಆದರೆ ಟಿಬೆಟಿನೊಂದಿಗೆ ವಿರಸ ಬೆಳೆಯಿತು. ಬ್ರಿಟಿಷ್ ಭಾರತ ಸೇನೆ ಲ್ಹ್ಹಾಸಕ್ಕೆ ನುಗ್ಗಿತು. 1904ರಲ್ಲಿ ಟಿಬೆಟರು ಶಾಂತಿಗೆ ಒಡಂಬಡಬೇಕಾಯಿತು. ಆಡಳಿತದ ನಾನಾ ಶಾಖೆಗಳನ್ನು ಕಜರ್ûನ್ ತೀಕ್ಷ್ಣವಾದ ತನಿಖೆಗೆ ಒಳಪಡಿಸಿ ಅವನ್ನು ಸುಧಾರಿಸಿದ. ಈ ಬಗ್ಗೆ ಸಾರ್ವಜನಿಕರಿಂದ ಬಂದ ಆಕ್ಷೇಪಣೆಗಳಿಗೆ ಲಕ್ಷ್ಯ ಕೊಡಲಿಲ್ಲ. ಇಂಪೀರಿಯಲ್ ಕೆಡೆಟ್ ಕೋರನ್ನು ಸ್ಪಾಪಿಸಿದವನೂ ಕಲ್ಕತ್ತದ ವಿಕ್ಟೋರಿಯ ಸ್ಮಾರಕಭವನ ನಿರ್ಮಿಸಿದವನೂ ಕಜರ್ûನನೇ. ಈ ಭವನಕ್ಕಾಗಿ ಭಾರತದ ಶ್ರೀಮಂತರನೇಕರಿಂದ ಈತ ವಿಪುಲ ಧನಸಂಗ್ರಹಮಾಡಿದ. 1903ರಲ್ಲಿ ಏಳನೆಯ ಎಡ್ವರ್ಡನ ಪಟ್ಟಾಭಿಷೇಕದ ಸಂದರ್ಭದಲ್ಲಿ ಕಜರ್ûನನೂ ದೆಹಲಿಯಲ್ಲಿ ದರ್ಬಾರ್ ನಡೆಸಿದ.

ಭಾರತದ ಹಣಕಾಸಿನ ನಿರ್ವಹಣೆಯಲ್ಲಿ ಕಜರ್ûನ್ ತೋರಿದ ಚಾಕಚಕ್ಯ ಅಸಾಧಾರಣ. ಈತನ ಕಾಲದಲ್ಲಿ ಉಪ್ಪಿನ ತೆರಿಗೆ ಎರಡು ಸಾರಿ ಇಳಿಯಿತು. ಕಡಿಮೆ ವರಮಾನಗಳ ಮೇಲಣ ತೆರಿಗೆ ರದ್ದಾಯಿತು. ಸರ್ಕಾರಿ ರಹಸ್ಯ ಕಾಯಿದೆ ಭಾರತೀಯ ಗಣಿಗಳ ಕಾಯಿದೆ, ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆ, ಸಹಕಾರ ಸಂಘಗಳ ಕಾಯಿದೆ--ಮುಂತಾದ ಹಲವಾರು ಕಾಯಿದೆಗಳು ಜಾರಿಗೆ ಬಂದದ್ದು ಈತನ ಅಧಿಕಾರದ ಕಾಲದಲ್ಲೇ.								(ಎಸ್.ವಿ.ಡಿ.)

ಆದರೆ ಕರ್ಜನನ ಧೋರಣೆಯೂ ಅವನು ಕೈಕೊಂಡ ಹಲವು ಕ್ರಮಗಳೂ ಹಲವು ಕ್ರಮಗಳೂ ಜನರಲ್ಲಿ ತೀವ್ರ ಅಸಮಾಧಾನಕ್ಕೂ ಕ್ರೋಧಕ್ಕೂ ಕಾರಣವಾದುವು. ವಿಶ್ವವಿದ್ಯಾಲಯಗಳ ಮಸೂದೆ ಇಂಥ ಕ್ರಮಗಳಲ್ಲೊಂದು. ಬಂಗಾಲದ ವಿಭಜನೆಯಿಂದಂತೂ ಸಿಂಹದ ಕೇಸರವನ್ನೇ ಹಿಡಿದೆಳೆದಂತಾಯಿತು. ಭಾರತೀಯರ ಗುಣವನ್ನೂ ಭಾರತ ರಾಷ್ಟೀಯ ಕಾಂಗ್ರೆಸನ್ನೂ ಅವಹೇಳನ ಮಾಡಿ ಈತ ಮಾಡಿದ ಅನೇಕ ಭಾಷಣಗಳಿಂದ ಜನರಲ್ಲಿ ವಿರೋಧ ತೀವ್ರವಾಯಿತು. ಎಲ್ಲ ರಾಜಕೀಯ ಚಳವಳಿಗಳನ್ನೂ ಮರ್ದಿಸಲು ಕೈಕೊಂಡ ಕ್ರಮಗಳಿಂದ ಪರಿಸ್ಥಿತಿ ಸುಧಾರಿಸುವ ಬದಲು ಇನ್ನೂ ಹದಗೆಟ್ಟಿತು. ಭಾರತೀಯರ ರಾಷ್ಟ್ರಪ್ರೇಮವೂ ಕಾಂಗ್ರೆಸಿನ ಬಗ್ಗೆ ಅವರ ಅಭಿಮಾನವೂ ಬೆಳೆಯಲು ಕಜರ್ûನನ ಅತ್ಯುಗ್ರ ಕ್ರಮಗಳೂ ಕಾರಣವಾದುವು.
1903ರಲ್ಲಿ ಕಜರ್óನನ ವೈಸ್‍ರಾಯ್ ಅಧಿಕಾರಾವಧಿ ಮುಗಿಯಿತು. 1904ರಲ್ಲಿ ಈತ ಮತ್ತೆ ನೇಮಕಗೊಂಡ. ಆದರೆ ವೈಸ್‍ರಾಯ್ ಮಂಡಲಿಯ ಸೈನಿಕ ಸದಸ್ಯನ ಅಧಿಕಾರವೇನೆಂಬುದರ ಬಗ್ಗೆ ಕಜರ್óನನಿಗೂ ಪ್ರದಾನ ದಂಡನಾಯಕನಾಗಿದ್ದ ಲಾರ್ಡ್ ಕಿಚನರನಿಗೂ ಮನಸ್ತಾಪ ಬೆಳೆದು, ಕಜರ್ûನ ಕೊನೆಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ. ಲಾರ್ಡ್ ಕಿಚನರ್‍ಗೆ ಲಂಡನಿನಲ್ಲಿ ವಿಶೇಷ ಪ್ರಭಾವವಿದ್ದದ್ದರಿಂದ ಇಂಗ್ಲೆಂಡಿನ ಸರ್ಕಾರ ಕಜರ್ûನನ ರಾಜೀನಾಮೆಯನ್ನು ಒಪ್ಪಿಕೊಂಡಿತು (1905). ಮರುವರ್ಷ ಕರ್ಜನನ ಪತ್ನಿ ತೀರಿಕೊಂಡಳು.

1907ರಲ್ಲಿ ಈತ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ (ಛಾನ್ಸಲರ್) ಚುನಾವಣೆಗೊಂಡು ಮತ್ತೆ ರಾಜಕೀಯಕ್ಕೆ ಜಾರಿಕೊಳ್ಳಲು ಸಮಯಕಾಯುತ್ತಿದ್ದ. ಅಲ್ಲೂ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಈತ ಕೆಡಲ್ ಸ್ಟನಿನ್ ಅರ್ಲ್ ಮತ್ತು ಬ್ಯಾರನ್ ರ್ಯಾವೆನ್ಸ್‍ಡೇಲ್ ಆದದ್ದು 1911ರಲ್ಲಿ. 1915ರಲ್ಲಿ ಆಸ್ಕ್ವಿತನ ಯುದ್ಧಕಾಲೀನ ಸಂಮಿಶ್ರ ಸರ್ಕಾರದಲ್ಲಿ ಕಜರ್ûನನಿಗೆ ಲಾರ್ಡ್ ಪ್ರಿವಿಸೀಲ್‍ನ ಅಧಿಕಾರ ಲಭ್ಯವಾಯಿತು. 1916ರಲ್ಲಿ ಆಸ್ಕ್ವಿತನ ಸರ್ಕಾರದ ಪತನವಾದ ಮೇಲೆ ಅಧಿಕಾರಕ್ಕೆ ಬಂದ ಡೇವಿಡ್ ಲಾಯ್ಡ್ ಜಾರ್ಜನ ಸರ್ಕಾರದಲ್ಲಿ ಕಜರ್ûನ್ ಯುದ್ಧದ ಒಳಸಂಪುಟದ ಸದಸ್ಯರಲ್ಲೊಬ್ಬನಾಗಿದ್ದ. 1917ರಲ್ಲಿ ಗ್ರೇಸ್ ಹಿಂಡ್ಸ್ ಡಗ್ಗನ್ ಎಂಬ ಅಮೆರಿಕನ್ ವಿಧವೆಯೊಬ್ಬಳನ್ನು ವಿವಾಹವಾದ. 

1919 ಆರಂಭದಲ್ಲಿ ಪ್ಯಾರಿಸಿನ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಲಾರ್ಡ್ ಬಾಲ್ಫರ್ ಅಲ್ಲಿಗೆ ಹೋಗಿದ್ದಾಗ ಅವನ ಸ್ಥಾನದಲ್ಲಿ ಈತ ಹಂಗಾಮಿಯಾಗಿ ವಿದೇಶಾಂಗ ಕಚೇರಿಯ ಹೊಣೆ ಹೊತ್ತಿದ್ದ. ಆ ವರ್ಷದ ಅಕ್ಟೋಬರಿನಲ್ಲಿ ಬಾಲ್ಫರ್ ರಾಜೀನಾಮೆ ನೀಡಿದ್ದರಿಂದ ಕಜರ್ûನನನ್ನೇ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದಾಗ ಈತನ ಬಾಳಿನ ಆಕಾಂಕ್ಷೆಗಳಲ್ಲೊಂದು ಪೂರೈಸಿದಂತಾಯಿತು. ಆದರೆ ಇವನಿಗೂ ಪ್ರಧಾನಮಂತ್ರಿಗೂ ಒಳ್ಳೆಯ ಸಂಬಂಧ ಬೆಳೆಯಲಿಲ್ಲ. ಕಜರ್ûನನನ್ನು ಕೇಳದೆಯೇ ಅವನ ಶಾಖೆಯ ವಿಚಾರಗಳನ್ನು ಪ್ರಧಾನಮಂತ್ರಿ ಇತ್ಯರ್ಥಪಡಿಸುತ್ತಿದ್ದ. ತುರ್ಕಿ ಗ್ರೀಸ್‍ಗಳ ನಡುವೆ ಘರ್ಷಣೆಯಾದಾಗ ತುರ್ಕರನ್ನು ಯೂರೋಪಿನಿಂದಲೂ ಗ್ರೀಕರನ್ನು ಏಷ್ಯದಿಂದಲೂ ದೂರ ಇಡಬೇಕೆಂಬುದು ಕಜರ್ûನನ ನೀತಿಯಾಗಿತ್ತು. ಲಾಯ್ಡ್ ಜಾರ್ಜ್ ಇದನ್ನೊಪ್ಪಲಿಲ್ಲ. ಕಜರ್ûನ್ ಪ್ರತಿಭಟಿಸಿದ. ರಾಜೀನಾಮೆ ಕೊಡುವುದಾಗಿ ಬೆದರಿಸಿದ. ಆದರೆ ರಾಜೀನಾಮೆ ಕೊಡುವ ಸ್ಥೈರ್ಯ ಬರಲಿಲ್ಲ. ಪದೇ ಪದೇ ಈತ ಮಾಡುತ್ತಿದ್ದ ಇಂಥ ಬೆದರಿಕೆಗಳು ಅಪಹಾಸ್ಯಕ್ಕೆಡೆಕೊಟ್ಟುವು. ಲಾಯ್ಡ್ ಜಾರ್ಜನ ತುರ್ಕಿ ನೀತಿ ವಿಫಲಗೊಂಡು ಅವನ ಸಂಮಿಶ್ರ ಸರ್ಕಾರಕ್ಕೆ ಗಂಡಾಂತರ ಬಂತು. ಬ್ರಿಟನಿನಲ್ಲಿ ಚುನಾವಣೆ ನಡೆಸಬೇಕೆಂದು ತೀರ್ಮಾನವಾಯಿತು. ಸ್ವಲ್ಪ ಕಾಲಾನಂತರ ಲಾಯ್ಡ್ ಜಾರ್ಜ್ ಮತ್ತೆ ಕಜರ್ûನನನ್ನು ಕಡೆಗಣಿಸಿ ವಿದೇಶಾಂಗ ವ್ಯವಹಾರಗಳಲ್ಲಿ ನೇರವಾಗಿ ಸಂಧಾನ ನಡೆಸತೊಡಗಿದ. ಇದರಿಂದ ಕಜರ್ûನನ ಅಸಮಾಧಾನ ಪರಮಾವಧಿಗೇರಿತು. ಕೊನೆಗೂ ಆತ ರಾಜೀನಾಮೆ ಕೊಟ್ಟ.

ಕಜರ್ûನನ ಅಭಿಮಾನ ಆಮೇಲೆ ಆಂಡ್ರ್ಯೂಬೊನಾರ್ ಲಾನ ಕಡೆಗೆ ತಿರುಗಿತು. 1922ರಲ್ಲಿ ಆತ ಪ್ರಧಾನಿಯಾದಾಗ ಕಜರ್ûನ್ ವಿದೇಶಾಂಗ ಕಾರ್ಯದರ್ಶಿಯಾದ. ಕೊನೆಗೂ ಕಜರ್ûನನಿಗೆ ತನ್ನ ಸಂಪೂರ್ಣ ಅಧಿಕಾರ ಚಲಾಯಿಸುವ ಸ್ವಾತಂತ್ರ್ಯ ಲಭ್ಯವಾಯಿತು. 

ಆದರೆ 1923ರಲ್ಲಿ ಅನಾರೋಗ್ಯ ನಿಮಿತ್ತ ಬೊನಾರ್ ಲಾ ರಾಜೀನಾಮೆ ನೀಡಿದ. ಆಗ ತಾನೇ ಪ್ರಧಾನಿಯಾಗುವೆನೆಂದು ಕಜರ್ûನನ್ ನೆನೆದಿದ್ದ. ಆದರೆ ಪಕ್ಷದ ಸದಸ್ಯರು ಕಜರ್ûನನ ನಿರೀಕ್ಷೆಯನ್ನು ಸುಳ್ಳುಮಾಡಿ ಸ್ಯಾನ್ಲೆ ಬಾಲ್ಡ್ವಿನನನ್ನು ತಮ್ಮ ನಾಯಕನನ್ನಾಗಿ ಆರಿಸಿದರು. ಪೀರ್ ಆದವನು ಪ್ರಧಾನಿಯಾಗಬಾರದೆಂಬುದು ಅವರು ಕೊಟ್ಟ ಕಾರಣ. ಆದರೆ ವಾಸ್ತವ ಕಾರಣ ಬೇರೆ. ಕರ್ಜನನ ವೈಭವ ಅಟ್ಟ ಹಾಸುಗಳೂ ಅಹಂಭಾವವೂ ಅನೇಕರಿಗೆ ಹಿಡಿಸುತ್ತಿರಲಿಲ್ಲ. ಪ್ರಜಾಪ್ರಭುತ್ವಯುಗದಲ್ಲಿ ಇವು ದೊಡ್ಡ ಅವಗುಣಗಳೆಂಬುದು ಅವರ ನಂಬಿಕೆಯಾಗಿತ್ತು. ತನಗೆ ಪ್ರಧಾನಿ ಹುದ್ದೆ ದೊರಕದಿದರೂ ಬಾಲ್ಡ್ವಿನನ ಸರ್ಕಾರದಲ್ಲಿ ಕರ್ಜನ್ ಮುಂದುವರಿಯಲೊಪ್ಪಿದ. 1923ರ ಚುನಾವಣೆಯಲ್ಲಿ ಬಾಲ್ಡ್ವಿನ್ ಸೋತ. 1924ರಲ್ಲಿ ಬಾಲ್ಡ್ವಿನ್ ಮತ್ತೆ ಸರ್ಕಾರ ರಚಿಸಿದಾಗ ಅದರಲ್ಲಿ ಕಜರ್ûನನಿಗೆ ಸ್ಥಾನ ದೊರಕಲಿಲ್ಲ. ಆತ ಲಾರ್ಡ್ ಪ್ರಿವಿ ಸೀಲನ ಹುದ್ದೆಯಲ್ಲೇ ಸಮಾಧಾನಪಟ್ಟುಕೊಳ್ಳಬೇಕಾಯಿತು. 1925ರ ಮಾರ್ಚ್ 20 ರಂದು ಕಜರ್ûನ್ ತೀರಿಕೊಡ. 1921ರಲ್ಲಿ ಈತ ಮಾಕ್ರ್ವಿಸ್ ಎಂದು ಸನ್ಮಾನಿತನಾಗಿದ್ದ.

ಕಜರ್ûನ್ ದಕ್ಷ ಆದರೆ ಇವನಲ್ಲಿ ಅನೇಕ ದುರ್ಗುಣಗಳಿದ್ದುವು. ತಾನು ನಂಬಿದ ತತ್ತ್ವಗಳಲ್ಲಿ ಅಚಲನಿಷ್ಠೆ ಈತನಿಗಿರಲಿಲ್ಲ. ಅತಿಯಾದ ವಿವರಗಳಲ್ಲಿ ಸಿಲುಕಿಕೊಂಡು ಪ್ರಧಾನಾಂಶಗಳನ್ನೇ ಮರೆತುಬಿಡುತ್ತಿದ್ದದ್ದು ಕಜರ್ûನನ ಇನ್ನೊಂದು ಕೊರತೆ. ಪ್ರಧಾನಿಯ ಅಧಿಕಾರ ಇನ್ನೇನು ನಿಲುಕಿತು ಎನ್ನುವಷ್ಟರಲ್ಲಿ ಅದನ್ನು ಗಳಿಸಲಾರದೆ ಹೋದ ಕಜರ್ûನನ ಜೀವನ ಅನೇಕ ಸಾಧನೆಗಳಿಂದ ತುಂಬಿದ್ದಾದರೂ ಅದೊಂದು ಯಶಸ್ವೀ ಜೀವನವೆಂದು ಹೇಳುವಂತಿಲ್ಲ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ